ಒಂದೇ ದಾರಿ

ಎಲ್ಲರಿಗೂ ಉಂಟು ಒಂದು ದಾರಿIMG_9980
ಹುಟ್ಟಿನಿಂದ ಸಾವಿನೆಡೆಗೆ ಸಾಗುವ ದಾರಿ
ಯಾರಿಗೂ ಭೇದ ಭಾವ ತೋರಿಸದ ದಾರಿ
ಕೊನೆ ಒಂದೇ ಎಂದು ನೆನಪಿಸುವ ದಾರಿ

ಸಂಭ್ರಮದ ಆರಂಭ ಕಾಣುವ ದಾರಿ
ಜಾತಿ, ಮತ, ಪಂಕ್ತಿ ಎಂದು ಬಾಂಧವ್ಯಗಳನ್ನು
ಕಡೆಗಣಿಸುವ ದಾರಿ
ಕರುಳಿಗೆ ಕಂಡರೂ ಕಣ್ಣಿಗೆ ಕಾಣದ ಕವಲುಗಳ ದಾರಿ
ಕೊನೆಗೆ ಸೇರುವುದು ದು:ಖದ ದಾರಿ(ಗೆ)

ಯಾವ ದೇವರು ಹುಟ್ಟಿಸಿಲ್ಲ ಈ ಕವಲುದಾರಿ
ನಮ್ಮ ಹೊಲಸು ಮನಸಿನ ಪ್ರತಿಬಿಂಬವೇ ಈ ದಾರಿ
ಯಾವ ಜೀವಿಯಲ್ಲೂ ಕಾಣದ ಈ ಕವಲು ದಾರಿ
ಮನುಜನಿಗೇಕೆ ಬೇಕು ಈಂತ ದಾರಿ

ಆರಂಭ ಅಂತ್ಯಗಳೆರಡಿರುವುದು ಒಂದೇ ದಾರಿ(ಯಲಿ)
ಜಾತಿ, ಮತ, ಪಂಕ್ತಿಗಳನ್ನು ಒಡೆದು ಹಾಕುವ ಈ ದಾರಿ(ಯಲಿ)
ಎಲ್ಲರೂ ಒಂದಾಗಿ ಸಾಗೋಣ ಈ ಹಸಿರ ದಾರಿ(ಯಲಿ)
ಮನುಜಮತ ಒಂದೇ ಎಂದು ಸಾರುವ ನಮ್ಮ ದಾರಿ(ಯಲಿ)

—–
-ವಿಶ್ವ ಕೀರ್ತಿ. ಎಸ್

Advertisements