ಪ್ರೀತಿಯ ಬೆಳಕು

ಕಾರಣ ಹೇಳದೆ ಹೋದೆ
ಸ್ವಪ್ನದಿಂದ, ಎಲ್ಲಿ ಹುಡುಕಲಿ ನಿನ್ನ?
ನೂರೊಂದು ನೆನಪಿನ ಬುತ್ತಿ
ಕಟ್ಟಿ, ಅಳಿಸದೇ ಹೋದೆ ಏಕೆ?
ನಿನ್ನ ಪ್ರೀತಿಯ ಬಾಣ
ರಾಡಿಗೊಳಿಸಿತು ನನ್ನ ಮನದ
ಕಡಲ, ಕಾಡುವ ಕನಸು-ನೆನಪಿನೊಳಗೆ
ಬಂದಿಸಿ, ನೀ ಮಾತ್ರ ಕಾಣದ
ಚುಕ್ಕಿಯಾಗಿ ಹೊಳೆಯುತಿರುವೆ, ಇನ್ನು
ಪ್ರೀತಿಯ ಕಾರಾಗೃಹದಲ್ಲಿ ಬಂದಿ ನಾನು
ಕಳೆದ ‘ನೆನಪ’ ಬಯಸಲೋ?
ಬರುವ ‘ಸ್ವಪ್ನವ’ ಕಾಯಲೋ?
ಉತ್ತರವಿಲ್ಲದೆ, ಈ ‘ಪ್ರೀತಿ’ ಕಾಯುತಿದೆ
ನಿನಗಾಗಿ, ಎಲ್ಲಿ ಅದೃಶ್ಯವಾಗಿರುವೆ?
ರಾತ್ರಿ ಹಗಲೆನ್ನದೆ ಆಗಸವ
ದಿಟ್ಟಿಸಿರುವೆ, ಸಹಸ್ರ ಚುಕ್ಕಿಗಳ
ಮಾಯಾ ಮಂಟಪದಲ್ಲಿ, ಜೀವ
ತಳೆಯುವ ನಿನ್ನ ಪ್ರೀತಿಯ ಬೆಳಕಿಗೆ

-ವಿಶ್ವ ಕೀರ್ತಿ ಎಸ್
೨೩.೦೩.೨೦೧೮

 

Advertisements

ನೆನಪು (ಭಾಗ -2)

ಇಂದು,
ಮೂಕವಾಯಿತು ಮಾತು,
ವರಷ ಉರುಳಿತು ಎದರುಗೊಂಡು,
ಮನಸ್ಸಿಲ್ಲದಿದ್ದರೂ ವಿವಶವಾಗಿದೆ ಮನಸ್ಸು,
ಯಾವುದು ಸರಿ, ಯಾವುದು ತಪ್ಪು,
ಯಾರು ಸರಿ, ಯಾರು ತಪ್ಪು,
ನಿರ್ಧರಿಸುವ ಮನಸ್ಸುಇನ್ನು ಉಳಿದಿಲ್ಲಾ.
ಈಗ ಮಾತಿಲ್ಲದಿರಬಹುದು, ದೂರವಿರಬಹುದು,
ಮನದ ಮೂಲೆಯಲ್ಲಿ, ಮೊಳಕೆಯಿಂದ
ಬಂದ ಬಾಲ್ಯದ ನೆನಪು ಯಾರು ಅಳಿಸಿಯಾರು?
….
ಮತ್ತೆ ಬರುವೆ ಬಾಲ್ಯದ ನೆನಪಿನ ಜೊತೆಗೆ,
ಬಾಲ್ಯದ ಮನಸ್ಸಿನ ಜೊತೆಗೆ.

—-
-ವಿಶ್ವಕೀರ್ತಿ ಎಸ್.

ನೆನಪು

ಅಂದು,
ಆಡಿದೆವು ಜಗವಮರೆತಿ,
ಕಲಿತೆವು ಒಟ್ಟಿಗೂಡಿ,
ಹಂಚಿ ತಿಂದೆವು ಒಂದೇ ತಟ್ಟೆಯಲಿ,
ಕಾಲದ ಪ್ರಜ್ಞೆಯೇ ಇಲ್ಲದಂತೆ
ಹರಟೆಹೊಡೆದವು,
ದೊಡ್ಡವರ ಗೋಜಿಗೆ ಹೋಗದೆ
ಕುಣಿದ ಎಷ್ಟೋ ದಿನಗಳು.
ಸಮಯ ಬಂದಾಗ
ದುಃಖದಲ್ಲಿ ಒಂದಾಗಿ,
ನಗುವಲ್ಲಿ ಜೊತೆಯಾಗಿ
ಕಳೆದ ಆ ಸುಂದರ
ದಿನಗಳ ನೆನಪೇ…ಅಮರ.

-ವಿಶ್ವಕೀರ್ತಿ. ಎಸ್

ನೀ ಶಾಂತವಾದರೇ, ಬದುಕು ಸಾಯುವುದು

o-kadale

ಓ ಕಡಲೇ, ಎಲ್ಲಿಂದ ತರುತಿರುವೆ
ಈ ಏರುತಿರುವ ಅಲೆಗಳನ್ನು?
ದೃಷ್ಠಿ ಹರಿಯುವ ತನಕ ಸಮನಾಗಿದ್ದು
ಹತ್ತಿರ ಬಂದಾಗ ಏರುತಿರುವೆ ಏಕೆ?

ಕಾಣದ ಅಂಚಿನಿಂದ ಬರುತಿಹುದು
ನೋವು ನಲಿವಿನ ಅಲೆಗಳು;
ಪ್ರೀತಿ ಧ್ವೇಷದ ಅಲೆಗಳು;
ಬದುಕು ಸಾವಿನ ಅಲೆಗಳು;
ಹಂಚುತಿರುವೆ ಸಮನಾಗಿ
ಯಾರಿಗೂ ಭೇದ ಭಾವ ತೋರದೆ.

ಮೋಡಗಳ ತುದಿಗೆ ಕಿರಣಗಳು ತಾಗಿ
ಹೊಳೆಯುತಿಹುದು ಹೊನ್ನಿನ ಬೆಳಕು,
ಮನಸ್ಸಿನ ಕತ್ತಲೆಯ ರಾಢಿಗೊಳಿಸಿ
ಒಳಗೆ ಮೂಡಿಸಿತು ಬಣ್ಣದ ಕನಸು.

ಹೊಸ ದಿನಕ್ಕೆ ತಯಾರಾಗುವ ಸೂರ್ಯ
ಕಡಲ ಚುಂಬಿಸಿ ಹೊರಟಿಹನು,
ನಮ್ಮಯ ನಾಳೆಯ ಬದುಕಿಗೆ
ಹೊಸ ಚೇತನವ ಮೂಡಿಸಿ ಹೊರಟಿಹನು.

ಅಲೆಯ ಏರುಪೇರುಗಳರಿತು
ಬಾಳುವುದೇ ನನ್ನಿ ಜೀವನ.
ಎಲ್ಲವೂ ಸಮನಾಗಿ ಸ್ವೀಕರಿಸಿ
ಮುಂದೆ ಸಾಗುವುದೇ ಮನುಜ ಮತ;
ಇದೇ ವಿಶ್ವ ಪಥ!

ಓ ಕಡಲೇ, ಎಲ್ಲಿಂದಲಾದರೂ
ಹೇಗಾದರೂ ತರುತಿರು ಅಲೆಗಳ,
ಕಾಣದ ಅಂಚಿಗೆ ತುಡಿಯುವ ಮನಸ್ಸಿಗೆ
ನಿನ್ನ ಈ ಅಲೆಗಳೇ ಸ್ಪೂರ್ತಿ.

ನೀ ಶಾಂತವಾದರೇ, ಬದುಕು ಸಾಯುವುದು.


ವಿಶ್ವ ಕೀರ್ತಿ. ಎಸ್.
01-01-2017
(ಕಾಸರಗೋಡಿನ ಕಡಲ ಕಿನಾರೆಯ ಸ್ಪೂರ್ತಿ)

Photo: Kasargod Beach (Editted in PicsArt).
Photo Credit: Viswa Keerthy S

First Light – CMBR

IYL-unesco
Celebrating IYL 2015

     If you look at the modern periodic table you will find hundred and eighteen elements listed in it. Out of this, ninety four elements occur naturally.  All these elements can be found on Earth (exceptions are there).  Elements are building block of things that you see around you.  Whether it’s a human, animal, tree, building, roads, bridges, monuments, mountains, etc, everything is made up of elements.  But the question that comes to our mind is who brought all these elements on the Earth?  How are they formed?  The answer is… all these elements are formed inside a star.  Yes, in a sense, everything that you see around is cooked inside a star!  Richard Feynman, a famous physicist once said that, the stuff which we are made was once cooked in a star and spit out.

      The entire universe comprises trillions of trillions stars which cooks the matter that we see around us.  The next question that arises is how do these stars form?  Well, these kinds of questions will go on….. it’s a never ending process. But then, where do we begin?

Yes, we begin at the beginning.
We begin at the Big Bang!

Big Bang
Artist view of Big Bang before the explosion.

     The universe which includes stars, galaxies, nebulae etc. is expanding for billions of years.  If you look back, somewhere in the past there must exist a time where the entire universe is concentrated in a point of high density (infinite density).  According to the accepted theory, this high density state of a point, exploded violently, creating the universe that we see today.  This is the Big Bang theory proposed by Edwin Hubble in the year 1929.  The explosion that we consider in Big Bang is not at all a violent explosion, in fact it is one of the silent explosions that you can ever think of and it is neither big nor bang!  This is just a name given to the theory.  The reason is this, the space, time, sound, matter, elements and more importantly the light that we feel and experience today was created after Big Bang!  Big Bang is just an expansion of a point of infinite density, nothing more that.  But then, how do we verify this theory?

     If this kind of an expansion has happened in the past, then we must be able to detect, outer surface of the expanding sphere which contains the information of big bang in the form of light.  According to the theory, this sphere of light should uniformly exist all over the space. In a sense we have to detect the first light from the big bang.  This is called background radiation of the Big Bang.  If we succeed, it confirms the theory Big Bang.

   In the year, 1960 two astrophysics namely Dickey and Pebbles were working on the challenge of finding background radiation of the Big Bang.  They came to the conclusion that, since universe is expanding from billions of years, the energy of the photons of background radiation must be less because of the expansion in space.  (Expanding Universe:  The space and time fabric between the galaxies expand.  The light or the photon which travels in this fabric also expands.  When it expands the energy of the photon becomes less – this is predicted by Einstein’s General Theory of Relativity) When they did the calculation by using Wien’s Displacement law, they found that photon’s energy lies in the microwave region of light.
Few miles away from this group of scientist there were two more researchers from Bell Laboratory namely Penzias and Wilson designing the Horn antenna for radio astronomy.  They were trying to remove the background noise in the antenna which is detected by the detector.  No matter how much they tried they were unable to remove the background noise even-though they replaced the detector for many times.  Interestingly the detector was detecting the noise in all the direction and at all times of the day.  After their unsuccessful attempt of trying to remove this noise, they come to the conclusion that, this signal is not a noise, it is actually coming from outer space.

     Later it turned out that the noise of Penzias and Wilson’s horn antennae was actually the background radiation of Big Bang that Dickey and Pebbles were searching for!  Yes, it was an accidental discovery by two researchers from Bell Laboratory who have no idea about background radiation.  All they did was they tuned their antennae to receive a microwave radiation.  The detector was detecting first light from the Big Bang but Penzias and Wilson thought it was noise!!  The temperature of the background radiation was 3 kelvin and it was in perfect agreement with the measured value from the theory.  This is famously called as 3 kelvin black body radiation curve or 3 K curve.   Both of them were awarded noble price in physics in the year 1978 for their accidental discovery of Background Radiation.  Press Release from Bell Labs can be seen here. This observation confirms Big Bang theory.  (Big Bang theory is still a debatable theory for other reasons).

Horn Antenna
Penzias and Wilson in front of Horn Antenna

     Today we have some of the sophisticated scientific instruments in the on-board satellites which are revolving around the Earth.  WMAP (Wilkinson Microwave Anisotropy Probe) has mapped the background radiation.  The first light from the Big Bang is here….

cmbr_planck_960
CMBR – Cosmic Microwave Background Radiation by WMAP

The Light which is the sole responsible for life on earth was actually began its journey 13.5 billion years ago.

Through light on some atoms for billions of years, eventually you have life!

Image Details:
First Image: International Year of Light and Light Based Applications – 2015 Logo
Second Image: S. Harris Cartoon
http://www.sciencecartoonsplus.com/gallery/physics/index.php
Third Image : Bell Labs
https://www.bell-labs.com/about/stories-changed-world/Cosmic-Microwave-Background-Discovery/
Fourth Image:
http://apod.nasa.gov/apod/ap130325.html
APOD Images, March 25, 2013
—–
Year 2015 is celebrated as International Year of Light and Light Based Technology by UN as a global event.  This year mark the 150th anniversary of Maxwell’s Equations by James Clerk Maxwell, the man who unfolded the secret of nature and answered what light is made up of. 

More Information about IYL 2015
UN Anniversaries
http://www.un.org/en/sections/observances/international-years/index.html
IYL – 2015 Home Page
http://www.light2015.org/Home.html
IYL – 2015 Blog
http://light2015blog.org/


Upcoming Topics for IYL 2015

  • Elusive Particles of the Universe
  • Biological Industry – Photosynthesis
  • Principe, Africa – 1919 TSE
  • Copy of Earth – Extraterrestrial Planet
  • ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು
  • Let there be light – Newton, Maxwell, Hertz and Einstein


Viswa Keerthy S

 

ಕಾಯಿಸದಿರು ನನ್ನ

ಬಾಗಿಲ ಬಳಿ ಬಂದು ಬಡಿಯುತಿರುವೆ
ತೆರೆಯುವೆಯ ನಿನ್ನ ಎದೆಯ ಬಾಗಿಲ
ಅರಿಯದೆ ಬಂದ ನನಗೆ
ಸಿಗುವುದೆ ನಿನ್ನ ಪ್ರೀತಿಯ ಸ್ನೇಹ

ಕೈ ಮುಗಿದು ಕೇಳುವೆ
ಕನಸಾಗುವೆಯ ನನ್ನ ನೆನಪಿಗೆ
ಖಾಲಿ ಇರುವುದು ಜಾಗ
ಬರುವೆಯ ನನ್ನ ಹೃದಯಕೆ

ಕಾಯಿಸದಿರು ಹೆಚ್ಚು ಕಾಲ
ಮಾತೇ ನಿಲ್ಲುವುದು ನನಗೆ
ನೋಯಿಸದಿರು ನನ್ನ
ಹೃದಯದ ಬಡಿತವೆ ನಿಲ್ಲವುದು ಕೊನೆಗೆ

ಹೆಚ್ಚು ಸಮಯ ಬೇಡ
ಒಪ್ಪಿಕೊ ನನ್ನ ಪ್ರೀತಿಯ
ಒಲ್ಲೆಯೆಂದರೂ ಕಾಯುವೆ
ಬಾಗಿಲ ಬಳಿಯೇ ಜೀವನದುದ್ದಕ್ಕೂ


ವಿಶ್ವಕೀರ್ತಿ ಎಸ್

ಈ ಭೂಮಿಗೆ ಜೀವವೇಇಲ್ಲ

Earth Life

ಹಗಲುಗಳಿಗೆ ಸೂರ್ಯನಿಲ್ಲ
ರಾತ್ರಿಗಳಿಗೆ ಚಂದ್ರನಿಲ್ಲ
ಕಾಡುಗಳಿಗೆ ಮರಗಳಿಲ್ಲ
ಮೋಡಗಳಿಗೆ ಮಳೆಇಲ್ಲ

ಕಷ್ಟಗಳಿಗೆ ಬೆಲೆಯಿಲ್ಲ
ಮೋಸಗಳಿಗೆ ಕೊನೆಇಲ್ಲ
ಬಡವರಿಗೆ ನ್ಯಾಯವಿಲ್ಲ
ಆಜ್ಞಾನಿಗಳಿಗೆ ಭಯವಿಲ್ಲ;

ಬಾಯಾರಿಕೆಗೆ ನೀರಿಲ್ಲ
ಊರಿಗೆ ಕೆರೆಇಲ್ಲ
ಬೆಟ್ಟದಲಿ ಕಲ್ಲಿಲ್ಲ
ಪ್ರಾಣಿಗಳಿಗೆ ವನವಿಲ್ಲ;

ಮಾತುಗಳಿಗೆ ವಿನಯವಿಲ್ಲ
ನಡತೆಗಳಿಗೆ  ಮಿತಿಇಲ್ಲ
ಮನಸ್ಸುಗಳಿಗೆ ಮನುಷ್ಯರಿಲ್ಲ
ಈ ಭೂಮಿಗೆ ಜೀವವೇಇಲ್ಲ


ವಿಶ್ವ ಕೀರ್ತಿ ಎಸ್

ಕಾರಂತರ ಮೂಕಜ್ಜಿ!

ಕುಂದಾಪುರದ ಮೂಡೂರು, ಹಿಂಡುಗಾನ, ಕೊಲ್ಲೂರಿನಲ್ಲಿ ನೆಡೆಯುವ ಕಥೆಯೇ “ಮೂಕಜ್ಜಿಯ ಕನಸುಗಳು”.  ಕಾರಂತರ ಕಾದಂಬರಿಗಳಲ್ಲೇ ಇದೊಂದು ವಿಶಿಷ್ಟವಾದ ಕಾದಂಬರಿ.  ಅಜ್ಜಿ ಮತ್ತು ಅವರ ಮೊಮ್ಮಗ ಸುಬ್ಬರಾಯನ ನಡುವೆ ನೆಡೆಯುವ ಮಾತುಕತೆಯೇ ಈ ಕಾದಂಬರಿಯ ಕಥಾವಸ್ತುವಾಗಿದೆ.  ಕಾರಂತರೆ ಹೇಳುವಂತೆ ಈ ಕಥೆಯಲ್ಲಿ ನಾಯಕನು ಇಲ್ಲ, ನಾಯಕಿಯು ಇಲ್ಲ, ಕಥೆಯಲ್ಲಿ ಬರುವ ಮೂಕಜ್ಜಿಯು ಸಹ ನಾಯಕಿಯಲ್ಲ.  ಇವರಿಬ್ಬರ ಮಾತುಕಥೆಯನ್ನು ಪುಷ್ಟೀಕರಿಸುವ ಸಂಧರ್ಬಗಳು, ಸನ್ನಿವೇಶಗಳು ಹಾಗೆಯೇ ನೆಡೆದು ಬರುತ್ತವೆ.

ಕಾರಂತರು ಸೃಷ್ಟಿಸಿರುವ ಮೂಕಜ್ಜಿ, ಸುಬ್ಬರಾಯನ ಪಾತ್ರಗಳು ಮೆಚ್ಚುವಂತದ್ದು.  ನಮ್ಮ ಯೋಚನೆಗಳನ್ನು ಪ್ರತಿಬಿಂಬಿಸುವ ನೈಜ ಪಾತ್ರಗಳಾಗಿ ಕಾರಂತರು ಇವರಿಬ್ಬರನ್ನು  ಸೃಷ್ಟಿಸಿದ್ದಾರೆ.  ಕಥೆಯ ಉದ್ದಕ್ಕೂ ಮೊಮ್ಮಗನಾದ ಸುಬ್ಬರಾಯ ತನ್ನ ಅಜ್ಜಿಗೆ ದೇವರ ಅಸ್ತಿತ್ವದ ಬಗ್ಗೆ, ಸೃಷ್ಟಿಕರ್ತ್ರನ ಬಗ್ಗೆ, ಮನುಷ್ಯ ಮತ್ತು ಪ್ರಾಣಿ ಪ್ರಪಂಚದಲ್ಲಿರುವ ಎರಡು ಜಾತಿಗಳಾದ ಗಂಡು ಹೆಣ್ಣಿನ ಬಗ್ಗೆ, ನಾವು ಹುಟ್ಟುಹಾಕಿರುವ ಜಾತಿಗಳ ಬಗ್ಗೆ,  ಮುಕ್ಕೋಟಿ ದೇವರನ್ನು ಪೂಜಿಸುವ ನಾವು ದೇವರನ್ನು ಏಕೆ ಪೂಜಿಸುತ್ತೇವೆ? ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆಯನ್ನೇ ಅಜ್ಜಿಗೆ ಕೇಳುತ್ತಾನೆ.  ಈ ಪ್ರಶ್ನೆಗಳಿಗೆಲ್ಲ ಅಜ್ಜಿಯ ಉತ್ತರವು, ಅವರ ಮಾತುಗಳು, ನಮ್ಮ ಸಂಸ್ಕೃತಿಯ ನಂಬಿಕೆಗಳನ್ನು ಮೀರಿದ ಉತ್ತರಗಳಾಗಿದ್ದವು.  ಅಜ್ಜಿಯ ಉತ್ತರವು ಕೆಲವೊಮ್ಮೆ ನಮ್ಮ ಆದಿ ಕಾಲದ ನಂಬಿಕೆಗಳನ್ನು ಪ್ರಶ್ನಿಸುವಂತಿದ್ದವು.  ಅವಾಸ್ತವಿಕ ಹೇಳಿಕೆಗಳಾಗಿದ್ದ ಅಜ್ಜಿಯ ಮಾತುಗಳನ್ನು ಕೇಳಿ ಊರಿನ ಜನರು ಅಜ್ಜಿಯನ್ನು ಎಂಬತ್ತರ ಮರಳು ಎಂದು ಕರೆಯುತ್ತಿದ್ದರು.  ಆದರೆ ಸುಬ್ಬರಾಯ ಅಜ್ಜಿಯ ಮಾತು, ಅವರ ಯೋಚನೆಯನ್ನು ನಿರಾಕರಿಸುತ್ತಿರಲಿಲ್ಲ.  ಅವನೇ ಹೇಳುವ ಹಾಗೆ ಅಜ್ಜಿಯ ಮಾತು ಹುಣಸೆಗೆ ಸಮ, ಅವರ ಮಾತು ಹುಳಿ ಸಿಹಿ ಬೆರೆತ ಮಾತು.  ಅನ್ನಿಸಿದ್ದನ್ನು ನೇರವಾಗಿ ನುಡಿಯುವುದು ಅವರ ರೂಡಿ.  ಜನ ಏನೇ ಹೇಳಿದರು ಅಜ್ಜಿಯ ಬಗ್ಗೆ ಅಪಾರ ಗೌರವ ಇರಿಸಿಕೊಂಡಿದ್ದನು.

ಅಜ್ಜಿಯ ಇನ್ನೊಂದು ಗುಣವೆಂದರೆ ಅವರು ಯಾವುದೇ ವಸ್ತುವನ್ನು ಮುಟ್ಟಿದರು ಸಹ, ಅದರ ಸಂಪೂರ್ಣ ಚರಿತ್ರೆ, ಇತಿಹಾಸ ಎಲ್ಲವೂ ಅವರ ಕಣ್ಣಮುಂದೆ ಬಂದು ನಿಲ್ಲುತ್ತಿತ್ತು.  ಕಣ್ಣು ಮುಚ್ಚಿಕೊಂಡು ಅವರಿಗೆ ಏನೇನು ಕಾಣುತ್ತದೋ ಅವೆಲ್ಲವನ್ನು ನುಡಿಯುತ್ತಿದ್ದರು.  ಇತಿಹಾಸ ಓದಿಕೊಂಡಿದ್ದ ಸುಬ್ಬರಾಯನು ಅಜ್ಜಿಗೆ ಏನೇನೊ ತಂದುಕೊಟ್ಟು, ಅದರ ಇತಿಹಾಸ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದನು.  ಮೂಡೂರಿನ ಮನೆಯ ಎದುರು ಇದ್ದ ಐನೂರು ವರ್ಷದ ಹಳೆಯ ಅಶ್ವತ್ಧದ   ಕಟ್ಟೆ, ಅಜ್ಜಿಯ ಎಂಬತ್ತು ವರ್ಷಗಳ ತಾಣವಾಗಿತ್ತು.  ಐನೂರು ವರ್ಷದ ಇತಿಹಾಸಕ್ಕೂ, ಅಜ್ಜಿ ಮೊಮ್ಮಗನ ಮಾತುಕತೆಗೂ ಈ ಅಶ್ವತ್ಧದ  ಕಟ್ಟೆ ಸಾಕ್ಷಿಯಾಗಿ ನಿಂತಿತ್ತು.

ಅಜ್ಜಿ ಹುಟ್ಟಿ ಬೆಳೆದದ್ದೇಲ್ಲ ಇಲ್ಲಿಯೇ, ಮೂಕಾಂಬಿಕೆ ಎಂಬ ಹೆಸರನ್ನಿಟ್ಟಿದ್ದ ಅವರ ತಂದೆ, ಹತ್ತು ವರ್ಷಕ್ಕೆ ಅವರನ್ನು ಲಗ್ನಮಾಡಿಸಿ ಮಾವನ ಮನೆಗೆ ಕಳಿಸಿದ್ದರು.  ಲಗ್ನವಾದ ಕೇವಲ ನಾಲಕ್ಕು ತಿಂಗಳಿಗೆ ಅವರ ಗಂಡ ತಿರಿಕೊಳ್ಳುತ್ತಾನೆ.  ಯವ್ವನ ಸ್ಥಿತಿಗೆ ಬರುವಷ್ಟರಲ್ಲೆ ಇಷ್ಟೆಲ್ಲ ಆದ ಅಜ್ಜಿಯನ್ನು ಮತ್ತೆ ಮೂಡೂರಿಗೆ ಅವರ ತಂದೆ ಕರೆತರುತ್ತಾರೆ.  ಅಲ್ಲಿಂದ ಇಲ್ಲಿಯವರೆಗೂ ಅಜ್ಜಿಗು ಮತ್ತು  ಐನೂರು ವರ್ಷ ಹಳೆಯದಾದ ಅಶ್ವತ್ಧದ ಕಟ್ಟೆಗೂ ಅವಿನಾಭಾವ ಸಂಭಂದ.  ಅವರ ಜೀವನದಲ್ಲಿ ಎಷ್ಟೋ ವರ್ಷ ಮಾತನಾಡದೇ ಇದ್ದಾಗ, ಊರಿನ ಜನರು ಅಜ್ಜಿಗೆ ಇಟ್ಟ ಹೆಸರು ಮೂಕಜ್ಜಿ ಎಂದು.  ಅದೇ ಅನ್ವರ್ಥನಾಮ ರೂಡಿಯಾಗಿ, ಅವರು ಮೂಕಜ್ಜಿ ಎಂದೇ ಪ್ರಸಿದ್ದಿಯಾದರು.  ಯವ್ವನವನ್ನು ಅನುಬವಿಸದೆ ಇದ್ದರೂ ಕೂಡ, ಅಜ್ಜಿಯ ಗಂಡು, ಹೆಣ್ಣು ಎಂಬ ಎರಡು ಜಾತಿಗಳ ಮೇಲೆ ಇದ್ದ ಯೋಚನ ಲಹರಿ ಸುಬ್ಬರಾಯನಿಗೆ ಆಶ್ಚರ್ಯವನ್ನುಂಟುಮಾಡುತಿತ್ತು.  ಕಾದಂಬರಿಯಲ್ಲಿ ಬರುವ  ಸುಬ್ಬರಾಯನ ಹೆಂಡತಿ ಸೀತೆ, ಬಾಲ್ಯ ಸ್ನೇಹಿತ ಜನ್ನ, ತಮ್ಮ ನಾರಾಯಣ, ಹಾಗೂ ನಾಗಿ, ರಾಮಣ್ಣನ ಕತೆಗಳು ಅಜ್ಜಿಯ ಯೋಚನೆಗಳಿಗೆ ಸಾಕ್ಷಿಯನ್ನೋದಗಿಸುತ್ತವೆ.  ಕಾರಂತರು ಕಾದಂಬರಿಯ ಮೊದಲೇ ಹೇಳುವಹಾಗೆ ಇಂತಹ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಇದ್ದರೆ, ನಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿಯಬಹುದು ಎಂದಿದ್ದಾರೆ.

ನಮ್ಮ ಯೋಚನ ಲಹರಿಗಳನ್ನು ಪಾತ್ರಗಳಾಗಿ ಬಿಂಬಿಸಿದ ಕಾರಂತರು, ಸಂಸ್ಕೃತಿಯ ನಂಬಿಕೆಗಳನ್ನು ಮೀರಿದ ಉತ್ತರಗಳನ್ನು ಕೊಡುವ ಅಜ್ಜಿಯ ನಂಬಿಕೆಗಳು, ಎಷ್ಟೋ ವರ್ಷಗಳ ಸೃಷ್ಟಿಯ ಇತಿಹಾಸವನ್ನು ಹುಡುಕುವ ಅಜ್ಜಿಯ ಕನಸುಗಳು, ನಮ್ಮ ಬಹುಕಾಲ ರೂಡಿಯಲ್ಲಿದ್ದ ನಂಬಿಕೆಗಳ ಮೇಲೆ ಪ್ರಶ್ನೆ ಮೂಡುವಂತೆ ಮಾಡುತ್ತದೆ.  ಅವಳ ಯೋಚನೆ, ಕನಸುಗಳನ್ನು ತಿಳಿಯಬೇಕಾದರೆ ಒಮ್ಮೆ ಪುಸ್ತಕವನ್ನು ಓದಿ ನೋಡಿ.

ಇಂತಹ ಪ್ರಬುದ್ಧ ಕಾದಂಬರಿಗೆ ಭಾರತ ಸರ್ಕಾರವು 1978 ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಿತು.  ಕನ್ನಡಕ್ಕೆ ಮೂರನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೀರ್ತಿ ಶಿವರಾಮ ಕಾರಂತರದಾಗಿತ್ತು.  ನಾ ಓದಿದ ಮೊದಲ ಜ್ಞಾನಪೀಠ ಪುರಸ್ಕೃತ ಕಾದಂಬರಿ ಇದು.

-ವಿಶ್ವ ಕೀರ್ತಿ .ಎಸ್
(06/08/2013)