ಬೆಳಗ್ಗೆ ಹಾಸಿಗೆ ಇಂದ ಎದ್ದಿ ಗಂಟೆ ನೋಡ್ತೀನಿ ಏಳುವರೆ ಆಗಿತ್ತು. ಎದ್ದಿ ಮುಖ ತೊಳ್ಕೊಂಡಿ, ಅಂಗಡಿಗೆ ಹೋಗಿ ನ್ಯೂಸ್ ಪೇಪರ್ ತಗೊಂಡ್ಬಂದೆ. ಪೇಪರ್ ಓದಕ್ಕೆ ಕುತ್ಕೊಂಡೆ, ದಿನ 3 ಡಿಸೆಂಬರ್ 2012, ಸೋಮವಾರ ಆಗಿತ್ತು. ಪೇಪರ್ ಓದುತ್ತಾ ಇದ್ದಾಗ, “ಅಬ್ದುಲ್ ಕಲಾಂ ಇಂದು ನಗರಕ್ಕೆ” ಅಂತ ಒಂದು ನ್ಯೂಸ್ ಇತ್ತು. ಕಲಾಂ ಇಂದು IISc ಗೆ ಬರ್ತಾ ಇದ್ದಾರೆ ಅಂತ ಆ ನ್ಯೂಸ್ ಅಲ್ಲಿ ಇತ್ತು. ನನ್ನ MSc ಡಿಗ್ರಿ ಮುಗಿಸಿ ಮೂರು ತಿಂಗಳಾಗಿತ್ತು. ಅಂತ ಹೆಳ್ಕೋಳೋ ರೀತಿ ಏನು ಕೆಲ್ಸ ಮಾಡ್ತಿರ್ಲಿಲ್ಲ. ಮನೆಲೇ ಕಾಲ ಕಳಿತಾ ಇದ್ದ ಸಮಯ. ದಿನವೆಲ್ಲ ಬಿಡುವಾಗೆ ಇದ್ದೇ. ಇವತ್ತು ಆದರೆ IISc ಗೆ ಹೋಗಿ ಅಬ್ದುಲ್ ಕಲಾಂನ ನೋಡ್ಲೇಬೇಕು ಅನ್ನುಸ್ತು. ಹೇಗೆ ಹೋಗೋದು ಅಂತ ಯೋಚ್ನೆ ಮಾಡ್ತಾಇದ್ದೆ. ತಕ್ಷ್ಣ ನನ್ ಮೊಬೈಲ್ ರಿಂಗ್ ಆಗಿತ್ತು ಕೇಳುಸ್ತು. ನನ್ ಫ್ರೆಂಡ್ ಚಂದ್ರಶೇಖರ ಕಾಲ್ ಮಾಡ್ತಾಇದ್ದ. ಕಾಲ್ ಎತ್ತಿ ಹಲೋ ಚಂದ್ರಶೇಖರ್ ಗುಡ್ ಮಾರ್ನಿಂಗ್ ಹೇಗಿದ್ಯ ಅಂತ ಕೆಳ್ದೆ? ನಾನು ಅವ್ನು ಹಾಗೆ ಸ್ವಲ್ಪ ಹೊತ್ತು ಮಾತಾಡ್ದೊ. ಅದೆಲ್ಲ ಅದ್ಮೇಲೆ ಕಾಲ್ ಮಾಡಿತ್ ವಿಚಾರಕ್ಕೆ ಬಂದ. ಇವತ್ತು ನಾನು ಓದಿತ್ ಸ್ಕೂಲ್ಗೆ “ಅಬ್ದುಲ್ ಕಲಾಂ” ಅವ್ರು ಬರ್ತಾ ಇದ್ದಾರೆ, ನೀನೇನಾದ್ರೂ ಫ್ರೀ ಇದ್ರೆ ಬರ್ತೀಯಾ ಅಂದ. ನನಗೆ ಫುಲ್ ಖುಷಿ! ಇಗ್ತಾನೆ ಅಬ್ದುಲ್ ಕಲಾಂ IISc ಗೆ ಬರ್ತಾರೆ ಅಂತ ಪೇಪರ್ ಅಲ್ಲಿ ಕೊಟ್ಟಿದ್ರು, ಅಲ್ಲಿಗೆ ಹೋಗಣ ಅನ್ಕೋಂಡೆ, ಅಷ್ಟ್ರಲ್ಲಿ ನಿನ್ ಕಾಲ್ ಮಾಡಿ ನಮ್ ಸ್ಕೂಲ್ಗೆ ಬಾ ಅಂತಿದ್ಯ, ಆದ್ರೆ ಪೇಪರ್ ಅಲ್ಲಿ ಎಲ್ಲು ನಿಮ್ ಸ್ಕೂಲ್ಗೆ ಬರ್ತಾವ್ರೆ ಅಂತ ಕೊಟ್ಟಿಲ್ಲ ಅಂದೆ. ಅದೆಲ್ಲ ನಂಗೊತ್ತಿಲ್ಲ, ನಮ್ ಸ್ಕೂಲ್ಗೆ ಅಬ್ದುಲ್ ಕಲಾಂ ಬರ್ತಾವ್ರೆ ನೀನು ಬಾ ಅಂದ. ಅಯ್ಯೋ ನಂಗೆ ಮಾಡಕ್ಕೆ ಏನು ಕೆಲ್ಸ ಇಲ್ಲ, ಖಂಡಿತ ಬರ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡ್ದೆ. ನನ್ ಫ್ರೆಂಡ್ಸ್ ನವೀನ, ಧನಂಜಯಗೂ ಕಾಲ್ ಮಾಡಿ ಹೆಳ್ದೆ. ಅವ್ರು ಬರ್ತೀನಿ ಅಂದ್ರು. ಇವತ್ತು ಅಬ್ದುಲ್ ಕಲಾಂ ನೋಡಕ್ಕೆ ಹೋಗ್ತಾಇದ್ದೀನಿ ಅಂತ ಮನೇಲಿ ಹೇಳಿ ನನ್ ಬ್ಯಾಗ್ ತೊಗೊಂಡಿ ಹೊರಟೆ.
ಮನೆ ಇಂದ 20 ನಿಮಿಷಕ್ಕೆ BMTCಲಿ ಸಿಟಿ ಮಾರ್ಕೆಟ್ಗೆ ಹೋದೆ. ನವೀನ ಅಲ್ಲಿಗೆ ಬರ್ತೀನಿ ಅಂದ. ಧನಂಜಯ ಡೈರೆಕ್ಟಾಗಿ ಸ್ಕೂಲ್ ಹತ್ರಾನೆ ಬರ್ತೀನಿ ಅಂದ. ಚಂದ್ರಶೇಖರ ಫೋನ್ ಅಲ್ಲಿ, ಮಾರ್ಕೆಟ್ ಇಂದ ಡೈರೆಕ್ಟಾಗಿ ದೇವನಗುಂದಿ ಕ್ರಾಸ್ ಹತ್ರ ಬನ್ನಿ, ಅಲ್ಲಿಂದ ಸ್ಕೂಲ್ಗೆ ನಾನ್ ಕೊರ್ಕೋಂಡಿ ಹೋಗ್ತೀನಿ ಅಂದ. ನವೀನ ಬಂದ್ ತಕ್ಷ್ಣ ಬಸ್ ಸಿಗ್ತು. ಮಾರ್ಕೆಟ್ ಇಂದ ದೇವನಗುಂದಿ ಕ್ರಾಸ್ ಗೆ ಹೊರಟೋ, ಬಸ್ ಓಂ ಫಾರಂ ದಾಟಿ ಚನ್ನಸಂದ್ರ ಅತ್ರ ಹೋಗ್ತಾ ಇದ್ದಾಗ, ಪಕ್ಕದಲ್ಲೆಲ್ಲಾ ದೊಡ್ಡ ದೊಡ್ಡ ಪ್ಲೆಕ್ಸ್ ಬ್ಯಾನರ್ ಕಾಣುಸ್ತು. “ಅಬ್ದುಲ್ ಕಲಾಂ ಅವರಿಗೆ ಸುಸ್ವಾಗತ” ಅಂತ ಬರೆದಿತ್ತು. ಅಲ್ಲಿಗೆ ಅಬ್ದುಲ್ ಕಲಾಂ ಬರ್ತಾ ಇದ್ದಾರೆ ಅನ್ನೋದು ಖಾತರಿ ಆಯ್ತು. ಮಾರ್ಕೆಟ್ನಿಂದ ದೇವನಗುಂದಿ ಕ್ರಾಸ್ ಗೆ ಹೋಗಕ್ಕೆ BMTC ಬಸ್ ಒಂದೂವರೆ ಗಂಟೆ ತಗೊಂಡ. ಅಂತೂ ಇಂತೂ ದೇವನಗುಂದಿ ಕ್ರಾಸ್ ಬಂತು, ಬಸ್ ಇಳಿತಾ ಇದ್ದಂಗೆ ಚಂದ್ರಶೇಖರ ಕಣ್ಣಿಗೆ ಬಿದ್ದ. ಇಲ್ಲಿಂದ ಒಂದ್ ಆರ್ ಏಳ್ ಕಿಲೋಮೀಟ್ರು ಚಿಕ್ಕತಿರುಪತಿ ರೋಡಲ್ಲಿ ಹೋದ್ರೆ, ಕಲ್ಕುಂಟೆ ಅಂತ ಊರ್ ಬರುತ್ತೆ, ಅಲ್ಲಿ ನಮ್ ಸ್ಕೂಲ್ ಇದೆ ಅಂತ ಹೇಳ್ತಾ ಇದ್ದ, ಅಷ್ಟ್ರಲ್ಲಿ ಇನ್ನೊಂದ್ ಬಸ್ ಬಂತು ಹತ್ಕೊಂಡಿ ಹೊದೋ. ಬಸ್ ಅಲ್ಲಿ ಒಬ್ಬ ಹುಡುಗನ ಹತ್ರ, ಅವತ್ ಆ ಸ್ಕೂಲಿನ ಪ್ರೊಗ್ರಾಮ್ ಇನ್ವಿಟೆಶನ್ ಸಿಕ್ತು. ಆ ಶಾಲೆಯ 50 ನೇ ವರ್ಷದ ಸುವರ್ಣ ಸಮಾರಂಭಕ್ಕೆ ಅಬ್ದುಲ್ ಕಲಾಂ ರನ್ನು ಆಹ್ವಾನಿಸಲಾಗಿತ್ತು ಎಂದು ತಿಳೀತು. ಚಂದ್ರಶೇಖರ ಅತ್ರ ನಾನು ನವೀನ ಆ ಸ್ಕೂಲ್ ಬಗ್ಗೆ ಇನ್ನೂ ವಿಚಾರುಸ್ತಿರುವಾಗ್ಲೆ, ಸ್ಕೂಲ್ ಬಂತು ಇಳಿರಿ ಅಂದ ಕಂಡೆಕ್ಟರ್.

ಆ ಶಾಲೆಯ ಹೆಸರು “ಶ್ರೀ ರಂಗನಾಥ ಗ್ರಾಮಾಂತರ ಪ್ರೌಡಶಾಲೆ”, ಕಲ್ಕುಂಟೆ ಅಲ್ಲಿ ಇತ್ತು. ಬೆಂಗಳೂರಿನಲ್ಲಿರುವ ಒಂದು ಡಿಗ್ರಿ ಕಾಲೇಜಿಗೆ ಅದರ ಕಟ್ಟಡವನ್ನು ಹೋಲಿಸಬಹುದಾಗಿತ್ತು. ತುಂಬಾ ವಿಶಾಲವಾಗಿತ್ತು. ನಾವ್ ಬೆಂಗಳೂರಿನಲ್ಲಿ ಓದಿದ್ದ ಸ್ಕ್ಕುಲಲ್ಲಿ ಆಟ ಆಡಲು ಒಂದ್ ಗ್ರೌಂಡು ಇರ್ಲಿಲ್ಲ. ಚಿಕ್ಕ ಚಿಕ್ಕ ಕ್ಲಾಸ್ ರೂಂಗಳು, ಆದ್ರಲ್ಲೆ ನೂರ್ ಜನನ ಕೂರುಸ್ತಿದ್ರು. ಆದ್ರೆ ಈ ಶಾಲೆ ತುಂಬಾ ವಿಶಾಲವಾಗಿತ್ತು. ಒಂದು ದೊಡ್ಡ ಮೈದಾನ, ವಿಶಾಲವಾದ ಕಟ್ಟಡ ಎಲ್ಲನೂ ನೋಡಿ ತುಂಬಾ ಖುಷಿ ಆಯ್ತು. ನಾವು ಇತರ ಒಂದ್ ಸ್ಕೂಲ್ ಅಲ್ಲಿ ಓದಿರ್ಬೇಕಾಗಿತ್ತು ಅನ್ನುಸ್ತು. ನಾವಂತು ಈ ಸ್ಕೂಲ್ ಅಲ್ಲಿ ಓದ್ಲಿಲ್ಲ, ನಮ್ಮ್ ಫ್ರೆಂಡ್ ಚಂದ್ರಶೇಖರ್ ನಾದ್ರೂ ಓದವ್ನಲ್ಲ ಅಂತ ಸಮಾದಾನ ಆಯ್ತು. ಸ್ಕೂಲ್ ಒಳಗೆ ಕರಕೊಂಡೊಗಿ ಅವನ ಕ್ಲಾಸ್ ರೂಮ್ ಎಲ್ಲ ತೋರುಸ್ದ. ಇಷ್ಟೆಲ್ಲ ಆಗೋಷ್ಟ್ರಲ್ಲಿ ಮಧ್ಯಾನ ಒಂದ್ ಗಂಟೆ ಆಗಿತ್ತು. ನಂಗೂ ನವೀನುಂಗು ಊಟ್ಟೆ ಚೂರ್ ಅಂತಿತ್ತು. ಚಂದ್ರಶೇಖರ್ ಗೆ ಊಟ ಎಲ್ಲ್ ಮಾಡೋದು ಅಂತ ಕೆಳ್ದೆ. ಹೆ ಈ ಊರಲ್ಲಿ ತುಂಬಾ ಫೇಮಸ್ ರಂಗನಾಥ ಸ್ವಾಮಿ ಟೆಂಪಲ್ ಇದೆ, ಅಲ್ಲಿ ಫ್ರೀಯಾಗಿ ಊಟಾನು ಕೊಡ್ತಾರೆ ಬಾ ಹೋಗಣ ಅಂದ. ಸೂಪ್ಪರ್, ಇನ್ಯಾಕೆ ಲೇಟ್ ಮಾಡೋದು ನಡೀ ಹೋಗಣ ಆಂದೋ. ಆ ಊರಿನ ಮಧ್ಯದಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಇತ್ತು. ಅಲ್ಲಿಗೆ ಹೋಗ್ತಾ ಇದ್ದಂತೆ ಊಟಕ್ಕೆ ಬನ್ನಿ ಬನ್ನಿ ಅಂತ ಕರೀತಿದ್ರು. ನಾವು ಹಿಂದು-ಮುಂದು ನೊಡ್ದಿರ ಒಳಗೆ ಹೋಗಿ ಕುತ್ಕೊಂಡೊ. ಪುಳಿಹೊಗರೆ, ಸಿಹಿ ಪೊಂಗಲ್, ಕಾರ ಪೊಂಗಲ್ ಹೊಟ್ಟೆ ತುಂಬೊ ಅಷ್ಟು ಹಾಕುದ್ರು. ಸೂಪ್ಪರಾಗಿತ್ತು, ಎಲ್ಲ ತಿಂದ್ ಅದ್ಮೇಲೆ ಚಂದ್ರಶೇಖರ್ ಹೆಳ್ದ, ಕಲ್ಕುಂಟೆ ತುಂಬಾ ಫೇಮಸ್ ಅಗಿರೋದು, ಪುಳಿಹೊಗರೆ ಮತ್ತೆ ಸಿಹಿ ಪೊಂಗಲ್ಗೆ, ಇದು ಇಲ್ಲೇ ಅಲ್ಲ ಫಾರಿನ್ಗೂ ಹೋಗಿದೆ ಅಂದ. ಆದ್ರ ಟೇಸ್ಟ್ ನೋಡುದ್ರೆ, ಅವ್ನ್ ಹೇಳಿದ್ದು ನಿಜ ಅನ್ನುಸ್ತು, ಅಸ್ಟ್ ಟೇಸ್ಟ್ ಇರೋ ಪುಳಿಹೊಗರೆ, ಸಿಹಿ ಪೊಂಗಲ್ ನಾನಂತೂ ಎಲ್ಲೂ ತಿಂದಿರ್ಲಿಲ್ಲ! ಊಟ ಎಲ್ಲ ಮಾಡಾದ್ಮೇಲೆ ದೇವಸ್ಥಾನದ ಒಳಗೆ ಹೊದೋ. ತಮಿಳುನಾಡಿನ ಶ್ರೀರಂಗಂನಲ್ಲಿರುವ ರಂಗನಾಥಸ್ವಾಮಿ ವಿಗ್ರಹ ಹೇಗಿದ್ಯೋ, ಹಾಗೆ ಇಲ್ಲೂ ರಂಗನಥಸ್ವಾಮಿಯ ಮಲಗಿರುವ ವಿಗ್ರಹ ಇದೆ. ಅದ್ಭುತವಾಗಿತ್ತು! ಪಕ್ಕದಲ್ಲಿದ್ದ ನೋಟಿಸ್ ಬೋರ್ಡ್ ಅಲ್ಲಿ ಹೀಗೆ ಬರೆದಿತ್ತು. “ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಈ ದೇವಸ್ಥಾನಕ್ಕೆ, ಇಂದು ಸಂಜೆ 3 ಗಂಟೆಗೆ ಬರುತ್ತಾರೆ”. ಸ್ಕೂಲ್ ಅತ್ರ ಜನ ಮರುಳೋ ಜಾತ್ರೆ ಮರುಳೋ ಅಂತ ತುಂಬಾ ಜನ, ಜಾತ್ರೆ ತರ ಸೇರಿದ್ರು. ಈ ಬೋರ್ಡ್ ನೋಡುದ್ಮೇಲೆ ನಾವ್ ಇಲ್ಲೇ ಇದ್ದು ಅಬ್ದುಲ್ ಕಲಾಂನ ನೋಡಣ ಆನ್ಕೊಂಡೊ. ತಕ್ಷ್ಣ ಧನಂಜಯ್ ಗೆ ಫೋನ್ ಮಾಡಿ ಊರಿನ ಟೆಂಪಲ್ ಅತ್ರ ಬಾ ಆಂದೋ. ಅವ್ನ್ ಇನ್ನೂ ಚನ್ನಸಂದ್ರ ಟ್ರಾಫಿಕ್ ಅತ್ರ ಸಿಕ್ಕಾಕೊಂಡಿದ್ದ. ಟೈಮ್ ಎರಡ್ ಗಂಟೆ ಆಗಿತ್ತು. ಇನ್ನೂ ಒಂದ್ಅವರ್ ಇತ್ತು. ಆಗಿನ ಆ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಬಚ್ಚೇಗೌಡ್ರು ಬಂದ್ರು, ಪೋಲೀಸುನೋರು ಬಂದಿ ಎಲ್ಲ ಪರೀಕ್ಷೆ ಮಾಡುದ್ರು. ನಾವ್ ದೇವಸ್ಥಾನದ ಒಳಗೆ ಇರೋಣ ಆನ್ಕೊಂಡೊ, ಆದ್ರೆ ಇಬ್ಬರು ಪೂಜಾರಿನ ಬಿಟ್ಟಿ ಯಾರನ್ನು ಒಳಗೆ ಬಿಡಲ್ಲ ಅಂದ್ರು. ಸರಿ ಅಂತ ಹೊರಗೆ ನಿಂತ್ಕೊಂಡೊ. ಆ ಊರಿನ ಸ್ವಲ್ಪ ಜನರು ಕೂಡ ಹೊರಗೆ ನಿಂತಿದ್ರು.
ಎಲ್ಲೋ ದೂರದಲ್ಲಿ ಪೋಲೀಸು ಸೈರನ್ ಕೇಳುಸ್ತು, ಐ ಥಿಂಕ್ ಅಬ್ದುಲ್ ಕಲಾಂ ಬಂದ್ರು ಅಂತ ಎಲ್ಲ ಆನ್ಕೊಂಡೊ. ಕಾರ್ ಸೈರನ್ ಜೊರಾಯ್ತು, ಪೋಲೀಸ್ ಕಾರ್ ಬಂದಿ ನಿಲ್ಲಿಸಿ ಎಲ್ಲ ಕೆಳಗೆ ಇಳುದ್ರು, ಮಧ್ಯದಲ್ಲಿದ್ದ ಕಾರ್ ಅಲ್ಲಿ ಅಬ್ದುಲ್ ಕಲಾಂ ಕೆಳಗೆ ಇಳುದ್ರು. ಮೂರ್ ಜನನು ಮೋದುಲ್ನೆ ಬಾರಿಗೆ ಅಬ್ದುಲ್ ಕಲಾಂ ನ ಲೈವ್ ಆಗಿ ನೋಡಿತ್ತು, ಫುಲ್ ಖುಷಿ ಪಟ್ಟೋ! ದೇವಸ್ಥಾನದ ಸಕಲ ಮರ್ಯಾದಿಯೊಂದಿಗೆ, ಡೊಳ್ಳು, ನಾಗಾರಿಯೊಂದಿಗೆ ಕಲಾಂರನ್ನ ದೇವಸ್ಥಾನದ ಒಳಗೆ ಕರೆದುಕೊಂಡಿ ಹೋದ್ರು. ಏನಾದ್ರೂ ಮಾಡಿ ಅವ್ರ್ ಆಟೋಗ್ರಾಫ್ ಪಡಿಬೇಕು ಅಂತ, ಬ್ಯಾಗಲ್ಲಿರೋ ಬುಕ್ ತಗ್ದೋ. ಒಬ್ಬ ಪೋಲೀಸು ನಮ್ನ ನೋಡ್ತಾ ಇದ್ದ. ಕೊನೆಗೆ ಹತ್ರ ಬಂದಿ ಏನದು ಅಂದ, ಅಬ್ದುಲ್ ಕಲಾಂ ಆಟೋಗ್ರಾಫ್ ಹಾಕುಸ್ಕೋಬೇಕಾಗಿತ್ತು, ಆದಿಕ್ಕೆ ಬುಕ್ ತಗ್ದೋ ಆಂದೋ. ಆದೇನ್ ಅನ್ನುಸ್ತೋ ಗೊತ್ತಿಲ್ಲ, ನನ್ನ ಬುಕ್ಕು, ಪೆನ್ನು ಇಸ್ಕೋಂಡ್ ಹೋದ. ಆವಾಗ ಧನಂಜಯ್ ಕಾಲ್ ಮಾಡಿ ನಾನು ಸ್ಕೂಲ್ ಅತ್ರ ಇದ್ದೀನಿ ಅಂದ, ಬೇಗ ದೇವಸ್ಥಾನಕ್ಕೆ ಬಾ ಆಂದೋ. ಅಲ್ಲಿಂದ 5 ನಿಮಿಷಕ್ಕೆ ಒಡ್ಬಂದ. ನಾಲಕ್ಕು ಜನನು ಹೊರಗೆ ನಿಂತಿದ್ದೋ. ಅಷ್ಟ್ರಲ್ಲಿ ದೇವಸ್ಥಾನದ ಒಳಗೆ ಹೋಗಿದ್ದ ಅಬ್ದುಲ್ ಕಲಾಂ ಹೊರಗೆ ಬಂದ್ರು, ಅವರಿಗೆ ಕಲ್ಕುಂಟೆಯ ಫೇಮಸ್ ಆದ ಪುಳಿಹೊಗರೆ, ಸಿಹಿ ಪೊಂಗಲ್ ಕೊಡಕ್ಕೆ ಒಂದ್ ರೂಂ ಒಳಗೆ ಕರೆದುಕೊಂಡಿ ಹೋದ್ರು. ಪೊಲೀಸ್ನೋರು ರೂಂ ಒಳಗೆ ಹೋದ್ರು. ನಮ್ ಅತ್ರ ಬುಕ್ ಯಾಕ್ ಪೋಲೀಸು ಅವ್ನು ಇಸ್ಕೊಂಡ ಅಂತ ಯೋಚ್ನೆ ಮಾಡ್ತೀರ್ಬೇಕಾದ್ರೆನೆ, ಆ ಪೊಲೀಸು ಅಬ್ದುಲ್ ಕಲಾಂ ಇರೋ ರೂಂ ಒಳಗೆ ಹೋದ. ಆ ಪೋಲೀಸು ನಮ್ಗೆ ಆಟೋಗ್ರಾಫ್ ಹಾಕುಸ್ಕೊಂಡಿ ಬರಕ್ಕೆ ಹೋಗಿದ್ದಾರೇನೋ ಆನ್ಕೊಂಡೊ. ಒಂದ್ 5 ನಿಮಿಷ ಬಿಟ್ಟಿ ಹೊರಗ್ ಬಂದ ಪೊಲೀಸ್, ಅಬ್ದುಲ್ ಕಲಾಂ ಆಟೋಗ್ರಾಫ್ ಹಾಕಿದ್ದ ಪೇಜ್ನ ಅರ್ಕೋಂಡಿ, ಬುಕ್ಕು ಪೆನ್ನು ವಾಪಸ್ ಕೊಟ್ಟಿ ಹೋದ. ನಾವು ಸಾರ್ ಸಾರ್ ಅಂದ್ರು ಏನು ಮಾತಾಡ್ದಿರ ಹೋದ.
ಹೋಗ್ಲಿ ಬಿಡು ಆನ್ಕೊಂಡಿ, ನಾವು ಏನಾದ್ರೂ ಮಾಡಿ ಆಟೋಗ್ರಾಫ್ ಹಾಕುಸ್ಕೋಬೇಕು ಆನ್ಕೊಂಡೊ. ಆ ರೂಂನಿಂದ ಹೊರಗೆ ಬಂದ ಅಬ್ದುಲ್ ಕಲಾಂ, ಊರಿನ ಜನರ ಹತ್ತಿರ ಮಾತಡಕ್ಕೆ ಹೋದ್ರು, ಜನ ಎಲ್ಲ ಫುಲ್ ತುಂಬ್ಕೊಂಡ್ರೂ, ನಾನು, ನವೀನ, ಧನಂಜಯ್ ಮದ್ಯದಲ್ಲಿ ನುಗ್ದೋ. ಪೊಲೀಸ್ ಅವ್ರ್ನು ಬೀಟ್ ಮಾಡಿ, ಅಂತೂ ಇಂತೂ ಅಬ್ದುಲ್ ಕಲಾಂ ಎದುರ್ಗಡೆ ಹೋಗಿ ನಿಂತ್ಕೊಂಡೆ. ನನ್ ಹೋಗೋಷ್ಟ್ರಲ್ಲಿ ಅಬ್ದುಲ್ ಕಲಾಂ ನವೀನುಂಗೆ ಆಟೋಗ್ರಾಫ್ ಹಾಕ್ತ ಇದ್ರು! ಜನ ಫುಲ್ ತುಂಬ್ಕೊಂಡಿ ನುಕ್ತಾ ಇದ್ರು, ಅದ್ರಲ್ಲು ಧನಂಜಯ್, ಅವ್ನ್ ಕ್ಯಾಮರಾದಲ್ಲಿ ಫೋಟೋ ತಗ್ದ. ಅದೇ ಈ ಕೆಳಗಿರೋ ಫೋಟೋ, ನವೀನ, ಅಬ್ದುಲ್ ಕಲಾಂ ಸ್ಪಷ್ಟವಾಗಿ ಕಾಣುತ್ತಾರೆ, ನಾನು ನವೀನನ ಪಕ್ಕದಲ್ಲಿ ಇದ್ದೇ.

ನವೀನುಂಗೆ ಆಟೋಗ್ರಾಫ್ ಹಾಕಿತ್ತಕ್ಷ್ಣ, ನಾನು ನನ್ ಬುಕ್ಕು, ಪೆನ್ನು (ಪೆನ್ನು ಧನಂಜಯನದು) ಕೊಟ್ಟೆ. ಪೆನ್ ಕೈ ಅಲ್ಲಿ ಇಡ್ಕೊಂಡ ಅಬ್ದುಲ್ ಕಲಾಂ ಆಟೋಗ್ರಾಫ್ ಹಾಕ್ಬೆಕು, ಅಷ್ಟ್ರಲ್ಲಿ ಪೋಲೀಸುನೋರು ಜನ ಜಾಸ್ತಿ ಹಾಗ್ತಿರೋದ್ ನೋಡಿ, ಸಾಕು ಸಾಕು ಅಂತ, ಪೆನ್ನು ಬುಕ್ ಎರಡನ್ನೂ ಅಬ್ದುಲ್ ಕಲಾಂ ಇಂದ ಇಸ್ಕೊಂಡಿ, ನಂಗೆ ವಾಪಸ್ ಕೊಟ್ರು. ನಾನು ಸಾರ್ ಸಾರ್ ಪ್ಲೀಸ್ ಅಂದೆ, ಅಬ್ದುಲ್ ಕಲಾಂ ನನ್ನ ನೋಡಿ ಅವ್ರ್ ಕೈ ಅಲ್ಲಿ ಇದ್ದ ಎರಡ್ ರೋಸ್ ನ ಕೊಟ್ರು! ಆಮೇಲೆ ನಂಗೂ ಥ್ಯಾಂಕ್ಸ್ ಕೊಟ್ಟಿ ಕೈ ಕುಲ್ಕುದ್ರು. (ನವೀನ್ಗೂ ಒಂದ್ ಥ್ಯಾಂಕ್ಸ್ ಸಿಕ್ಕಿತ್ತು). ಜೀವನ ಪಾವನವಾಯ್ತು ಅಂತರಲ್ಲ, ಆ ಕ್ಷಣಕ್ಕೆ ಹಾಗೆ ಅನ್ನಿಸಿತ್ತು! ಪೊಲೀಸ್ನೋರು ಎಲ್ರೂನ್ನು ತಳ್ಳಿ ಅಬ್ದುಲ್ ಕಲಾಂ ನ ಸ್ಕೂಲ್ ಅತ್ರ ಕರೆದುಕೊಂಡಿ ಹೋದ್ರು. ನಮ್ಗೆ ಒಂದ್ 15 ನಿಮಿಷ ಎನ್ ಮಾಡ್ಬೇಕು ಅಂತನೇ ಗೊತ್ತಾಗ್ಲಿಲ್ಲ. ನನಗೆ ಎರಡ್ ರೋಸ್, ಕೈ ಕುಲ್ಕೋ ಚಾನ್ಸ್ ಸಿಕ್ತು, ನವೀನ್ಗೆ ಆಟೋಗ್ರಾಫ್, ಮತ್ತೆ ಕೈ ಕುಲ್ಕೋ ಚಾನ್ಸ್, ಧನಂಜಯ್ ಪೆನ್ ನ ಅಬ್ದುಲ್ ಕಲಾಂ ಸ್ವಲ್ಪ ಹೊತ್ತು ಕೈ ಅಲ್ಲಿ ಇಡ್ಕೊಂಡಿದ್ರು, ಪ್ರಪಂಚನೆ ಗೆದ್ದಿರೋ ಖುಷಿ ತಾರ ಇತ್ತು.
ಇಷ್ಟೆಲ್ಲ ಅದ್ಮೇಲೆ ಸ್ಕೂಲ್ ಅತ್ರ ಹೊದೋ, ಅಲ್ಲಿ ಫುಲ್ ಸೆಕ್ಯುರಿಟಿ, ತುಂಬಾ ದೂರದಿಂದ ಸ್ಟೇಜ್ ಮೇಲೆ ಇರೋ ಅಬ್ದುಲ್ ಕಲಾಂ ನ ದೊಡ್ಡ ಪರದೆ ಮೇಲೆ ನೊಡ್ಬೇಕಿತ್ತು. ನನ್ನ ಕ್ಯಾಮರಾ ಲೆನ್ಸ್ ಇಂದ ಜೂಮ್ ಹಾಕುದ್ರು, ಕ್ಲ್ಯಾರಿಟಿ ಫೋಟೋ ಬರ್ಲಿಲ್ಲ. ಆದ್ರೂ ಅವ್ರ ಮಾತು ಕೆಳ್ಬೆಕು ಅಂತ ಪರದೆ ಮುಂದೆನೇ ನಿಂತ್ಕೊಂಡಿ ಕೆಳ್ದೋ. ಅವ್ರ ಭಾಷಣ ಮೊಸ್ಟ್ ಇನ್ಸ್ಪಿರೇಷನ್ ಆಗಿತ್ತು. ಎಷ್ಟೋ ಜನ ಮೊಬೈಲ್ ಅಲ್ಲಿ ರೆಕಾರ್ಡ್ ಮಾಡ್ಕೊಂಡ್ರು. ನಮ್ ಧನಂಜಯನು ಮಾಡ್ಕೊಂಡ. ಅವರು ಭಾಷಣದ ಮಧ್ಯ ಹೇಳಿದ ಒಂದು ಮಾತು ಇನ್ಸ್ಪಿರೇಷನ್ ಆಗಿತ್ತು. ಅದನ್ನ ಅಬ್ದುಲ್ ಕಲಾಂ ಹೇಳೋವಾಗ್ಲೆ ನಾನು ಫೋಟೋ ಕ್ಲಿಕ್ಕ್ಕಿಸಿದ್ದೆ, ಪಕ್ಕದಲ್ಲಿ ಇರುವ ಫೋಟೋ ಅದೆ. ಅವರ ಭಾಷಣ ಮುಗಿದಮೇಲೆ ಸ್ವಲ್ಪ ಹೊತ್ತು ಇದ್ದು, ನಂತರ ದೆಹಲಿಗೆ ಹೊರಡ್ಬೇಕು ಅಂತ ಹೊರಟ್ರು. ಈ ದಿನ ನಮಗೆ ಮರೆಯಲಾಗದ ದಿನ ಆನ್ಕೊಂಡಿ, ಚಂದ್ರಶೇಖರನಿಗೆ ತುಂಬಾ ತುಂಬಾ ಥ್ಯಾಂಕ್ಸ್ ಹೇಳಿ ಅಲ್ಲಿಂದ ಹೊರಟೋ.
ಅಲ್ಲಿಂದ ಹೊರಟಿ ಮನೆಗೆ ಸೇರಿದ್ದು, ಒಂದು ದೊಡ್ಡ ಕತೆನೆ, ಅದೆಲ್ಲ ಬರುದ್ರೆ ಇನ್ನೂ ಒಂದ್ ಮೂರ್ ನಾಲ್ಕ್ ಪ್ಯಾರಾ ಆಗುತ್ತೆ, ಇವಾಗ ಬ್ಯಾಡ ಅದು. ಬೆಳಗ್ಗೆ ನ್ಯೂಸ್ ಪೇಪರ್ ಓದುತ್ತಾ ಇದ್ದಾಗೆ ಬಂದ ಆಸೆ ಸೂಪ್ಪರಾಗಿ ಫುಲ್ ಫಿಲ್ ಆಯ್ತು! ನಾನು IISc ಗೆ ಹೋಗಿದ್ರೂ ಇತರ ಕಲಾಂನಾ ನೋಡಕ್ಕೆ ಆಗ್ತಿರ್ಲಿಲ್ಲ. ಆಸೆ ಫುಲ್ ಫಿಲ್ ಮಾಡಿದ್ದ ಚಂದ್ರಶೇಖರನಿಗೆ ಒಂದು ದೊಡ್ಡ ಥ್ಯಾಂಕ್ಸ್. ನಾನು, ನವೀನ ಮತ್ತು ಧನಂಜಯ ಅಂದು ಮನೆಗೆ ಹೋದಾಗ ರಾತ್ರಿ ಹತ್ತುವರೆ. ಮನೆಗೆ ಹೋದವನೆ ಅಬ್ದುಲ್ ಕಲಾಂ ಕೊಟ್ಟಿದ್ದ ರೋಸ್ ನ ತೋರ್ಸಿ ಈ ಕತೆನೆಲ್ಲ ಹೇಳಿದ್ದಾಯ್ತು. ರಾತ್ರಿ ಮಲ್ಕೊಂಡಾಗು ಅದೆ ನೆನಪು.


ಅಬ್ದುಲ್ ಕಲಾಂ ಅವರು ದೇವಸ್ಥಾನಕ್ಕೆ ಬಂದಾಗ, ನನ್ನ ಮೊಬೈಲ್ ಅಲ್ಲಿ ತೆಗೆದ ವೀಡಿಯೋ…
——-
(ಬೆಂಗಳೂರಿನ ಇಂಗ್ಲಿಷ್ ಮಿಶ್ರಿತ ಕನ್ನಡಕ್ಕೆ ಕ್ಷಮೆ ಇರಲಿ)
-ವಿಶ್ವ ಕೀರ್ತಿ .ಎಸ್