ಬೆಂಗಳೂರಿನಲ್ಲಿ ದನಗೋಳು ಮಳೆ ಸುರಿಯುತ್ತಿದ್ದಾಗ, ‘ಪ್ರಕೃತಿಯ’ ಬಗ್ಗೆ ಹಾಗೆ ಬಂದು ಹೋದ ಒಂದು ಸಣ್ಣ ಯೋಚನೆ…
…ಎಷ್ಟೋ ಬಾರಿ ನಾವು ಭೂ ಕೇಂದ್ರಿತವಾಗಿ (ಮನುಷ್ಯ ಕೇಂದ್ರಿತ) ಪ್ರಕೃತಿಯ ಬಗ್ಗೆ ಯೋಚನೆ ಮಾಡುತ್ತೇವೆ ಮತ್ತು ನಮ್ಮ ಮತ್ತು ಪ್ರಕೃತಿಯ ಮಧ್ಯವಿರುವ ಸಂಬಂಧ, ಲಾಭ ನಷ್ಟ, ಇತ್ಯಾದಿಗಳನ್ನು ಹುಡುಕಲು ಪ್ರಯತ್ನಿಸುತ್ತೇವೆ. ಆದರೇ, ಪ್ರಶ್ನೆ ಇರುವುದು ಪ್ರಕೃತಿ ಅಂದ್ರೇ ಇಷ್ಟೇನಾ?
“ವಿಶ್ವದ ಪ್ರಕೃತಿ” ಯಲ್ಲಿ, ಭೂಮಿಯ ಮೇಲೆ ನಾವು ನೋಡುವ ಪ್ರಕೃತಿಯು ಯಕಃಶ್ಚಿತ್ ಧೂಳಿನ ಕಣಗಳಿಗಿಂತ ಸಣ್ಣ ಪ್ರಮಾಣ. ವಿಶ್ವದ ಉಗಮವನ್ನು ನಾವು ವೈಜ್ಞಾನಿಕವಾಗಿ ಅಂದಾಜಿಸಿದ್ದೇವೆ (ಎಷ್ಟು ವರ್ಷದ ಹಿಂದೆ ಎಂದು), ಅಲ್ಲಿಂದ ಎಲ್ಲವೂ (ಅಣು, ಪರಮಾಣು, ಅನಿಲದ ಮೋಡಗಳು ಇತ್ಯಾದಿ) ಗುರುತ್ವ (ನಾವು ಈ ರೀತಿ ಹೆಸರು ಕೊಟ್ಟಿದ್ದೇವೆ) ಬಲದ ಮೂಲದಿಂದ ರಚನೆಗೊಂಡ ನಿಯಮಗಳಿಂದ (ಕೆಲವು ನಿಯಮಗಳನ್ನು ಕಂಡು ಹಿಡಿದಿದ್ದೇವೆ) ನಾನಾ ರೀತಿ ರೂಪ ಪಡೆಯುತ್ತಿದೆ, ನಾನು, ನೀವು, ಬೆಟ್ಟ, ಗುಡ್ಡ, ನದಿ, ಬಸ್ಸು, ಕಾರು, ಗ್ರಹ, ಸೂರ್ಯ, ನಕ್ಷತ್ರ, ಗ್ಯಾಲಾಕ್ಸಿ, ಬ್ಲಾಕ್ ಹೊಲ್ ಇಡೀ ವಿಶ್ವ…. ಎಲ್ಲವೂ ಒಂದೆ, ಅಂದರೆ ನಾವೆಲ್ಲರೂ ಒಂದೆ, ನಾವು ಕೂಡ ವಿಶ್ವದ ಪ್ರಕೃತಿಯ ಒಂದು ರೂಪ, ಬೇರೆನಲ್ಲಾ… ಹೀಗೆ ಕೋಟ್ಯಾನು ಕೋಟಿ ಜೀವ ರಾಶಿಗಳು (ಪ್ರಕೃತಿಯ ರೂಪಗಳು) ಕೋಟ್ಯಾನು ಕೋಟಿ ಗ್ರಹಗಳಲ್ಲಿ (ನಮ್ಮಂತಹ ಭೂಮಿ ಅನ್ಕೋಳಿ) ಅದರ ಅದರ ವಾತವರಣದಲ್ಲಿ ಬದುಕುತ್ತಿರಬಹುದು.
ಇಂತಹ ಉಹೆಗೂ ನಿಲುಕದೆ ಹರಡಿರುವ ಪ್ರಕೃತಿಯಲ್ಲಿ ಕುವೆಂಪು ಹೇಳಿದಂಗೆ, ‘ಯಾರು’ ಮುಖ್ಯರಲ್ಲಾ, ‘ಯಾರು’ ಅಮುಖ್ಯರಲ್ಲಾ, ‘ಯಾವುದು’ ಯಕಃಶ್ಚಿತವಲ್ಲಾ…. ಯಾವ ಲಾಭ, ನಷ್ಟ, ಉದ್ದೇಶ, ಗುರಿ ಈ ‘ಪ್ರಕೃತಿ’ ಗೆ ಇಲ್ಲಾ…
ಹೀಗೆ ನಿಮಗೇನಾದರೂ ವಿಚಿತ್ರ ಯೋಚನೆಗಳು ಬಂದಿದ್ದರೆ, ಈ ಲೇಖನಕ್ಕೆ ರಿಪ್ಲೈ ಮಾಡಿ…
—
ವಿಶ್ವಕೀರ್ತಿ ಎಸ್.