“ಪದ್ಮಪಾಣಿ” ಕಥಾ ಸಂಕಲನ

padmapani front pageಸಮಯ ಏಳು ಗಂಟೆಯಾಗಿತ್ತು, ಈಮೇಲ್ ಚೆಕ್ ಮಾಡುವ ಎಂದು ನನ್ನ ಕಂಪ್ಯೂಟರ್ ಆನ್ ಮಾಡಿದ್ದೆ.  ತಕ್ಷಣ ನಾನು ಪಿ.ಎಚ್.ಡಿ ಗೆ ಪ್ರವೇಶ ಪರೀಕ್ಷೆ ಬರೆದಿದ್ದು ನೆನಪಾಯ್ತು, ಅದರ ರಿಸಲ್ಟ್ ಏನಾದರೂ ಹಾಕಿದ್ದಾರ ಎಂದು ಅವರ ವೆಬ್-ಸೈಟ್ಗೆ  ಹೋಗಿ ನೋಡಿದೆ, ರಿಸಲ್ಟ್ ಹಾಕಿದ್ರು.  ಸತತ ಮೂರನೇ ಬಾರಿ ಅದರಲ್ಲಿ ಫೆಲ್ ಹಾಗಿದ್ದೆ! ನನ್ನ ಪಿ.ಎಚ್.ಡಿ. ಮಾಡುವ ಯೋಚನೆಯಲ್ಲ ತಲೆಕೆಳಗಾಗಿದ್ದವು.  ಮನೇಲಿ ಮತ್ತೆ ಫೆಲ್ ಆಗಿದ್ದೀನಿ ಅಂತ ಹೆಳ್ದೆ.  ಸ್ವಲ್ಪ ಹೊತ್ತು ಬೈದರು, ಸರಿ ಇನ್ನೊಂದು ಸಾರಿ ಕಟ್ಟಿ ಅದನ್ನು ಪಾಸ್ ಮಾಡಲೇ ಬೇಕು ಅಂತ ಓದು ಪಾಸ್ ಆಗ್ತೀಯಾ, ಇಲ್ಲಾಂದ್ರೆ ನಿನ್ ಪಾಸೇ ಆಗಲ್ಲ ಅಂತ ಬೈದರು.  ಎಲ್ಲನು ಏನು ಮಾತಾಡ್ದಿರ ಕೇಳುಸ್ಕೊಂಡಿ ಬೇಜಾರಾಗಿ ನನ್ನ ರೂಮಿಗೆ ಬಂದೆ.  ಟೇಬಲ್ ಮೇಲೆ ಪದ್ಮಪಾಣಿ ಪುಸ್ತಕ ಕಾಣುಸ್ತು.  ಇನ್ನು ಒಂದು ಕಥೆ ಅದರಲ್ಲಿ ಓದುವುದು ಬಾಕಿ ಇತ್ತು.  ಆ ರಾತ್ರಿ ಪುಸ್ತಕ ಓದಿ ಮುಗಿಸಿದೆ.  ಪುಸ್ತಕ ಓದಿ ಮಲಗಿದಾಗ ಆ ರೋಚಕದ ಕಥೆಗಳು ಇನ್ನು ನನ್ನ ತಲೆಯಲ್ಲಿ ಮರೆಯಾಗದೆ ನನ್ನನ್ನು ಎಬ್ಬುಸುತ್ತಿದ್ದವು.

ಒಮ್ಮೆ ಈ ಪುಸ್ತಕವನ್ನು ಓದಲು ಶುರು ಮಾಡಿದರೆ, ಅಲ್ಲಿರುವ ಕಥೆಗಳು ನೀವು ಏನೇ ಮಾಡಿದರು ಪುಸ್ತಕವನ್ನು ಮುಚ್ಚಿಡಲು ಬಿಡುವುದಿಲ್ಲ.  ಥ್ರಿಲ್ಲರ್, ಪತ್ತೆದಾರಿಯಂತಹ ಅಂಶಗಳನ್ನೊಳಗೊಂಡ ನೈಜ ಕತೆಗಳು ಎಂತವರನ್ನು ಆಶ್ಚರ್ಯ, ವಿಸ್ಮಯಗೊಳಿಸುವುದರಲ್ಲಿ ಸಂದೇಹವಿಲ್ಲ.  ಇತಿಹಾಸದ ಕಾಲಗರ್ಬದಲ್ಲಿ ಹೂತುಹೋದ ಎಷ್ಟೋ ನೈಜ ಸತ್ಯಗಳನ್ನು ಓದಿದಾಗ ಆಗುವ ರೋಮಾಂಚನದ ಅನುಭವ ಹೇಳತೀರದು.  ಈ ಸತ್ಯ ಕಥೆಗಳನ್ನೆಲ್ಲ ಒಂದು ವಿಭಿನ್ನ ಶೈಲಿಯಲ್ಲಿ ಉಣಬಡಿಸಿದವರು   ಡಾ. ಕೆ.ಎನ್. ಗಣೇಶಯ್ಯನವರು. ವೃತ್ತಿಯಲ್ಲಿ ಒಬ್ಬ ಕೃಷಿ ವಿಜ್ಞಾನಿಯಾಗಿರುವ ಇವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಗಿದ್ದಾರೆ.  ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವ ವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಸಂಶೋಧನೆ.  ಮೂಲತಃ ವಿಜ್ಞಾನಿಯಾಗಿರುವ ಇವರು, ಕನ್ನಡದ ಬರವಣಿಗೆ ಶೈಲಿ, ಇತಿಹಾಸವನ್ನು ಹೊಳಹೊಕ್ಕಿ ನೋಡುವ ರೀತಿ ಮೆಚ್ಚುವಂತದ್ದು.  ಇಂಗ್ಲೀಷಿನ ಪತ್ತೇದಾರಿ ಕಾದಂಬರಿಗಳಂತೆ, ಕನ್ನಡದಲ್ಲಿ ಪತ್ತೆದಾರಿಯ ಜೊತೆ, ಇತಿಹಾಸ ಮತ್ತು ಅವರು ಈ ಇತಿಹಾಸದ ಸತ್ಯವನ್ನು ಹುಡುಕುವ ಪಯಣವನ್ನು ಸೇರಿಸಿ ಬರೆದಿರುವ ಈ ಕಥೆಗಳು ಓದಿದವರಿಗೆ ಅದ್ಬುತ ರೋಮಾಂಚನವನ್ನು ಉಂಟುಮಾಡುವುದರಲ್ಲಿ ಎರಡು ಮಾತಿಲ್ಲ.  ಪುಸ್ತಕದಲ್ಲೇ ಹೇಳಿರುವಹಾಗೆ ಕನ್ನಡ ಸಾಹಿತ್ಯದಲ್ಲೇ ಒಂದು ಹೊಸ ಬರವಣಿಗೆಯ ಮೂಲಕ ಪರಿಚಯಿಸಿಕೊಂಡಿರುವ ಇವರು, ಎಲ್ಲರ ಮೆಚ್ಚುಗೆ ಪಡೆದು “ಕನ್ನಡಕ್ಕೊಬ್ಬನೆ ಗಣೇಶಯ್ಯ” ಎಂದೆನಿಸಿಕೊಂಡಿರುವುದು ಅತ್ಯಂತ ಗಮನಾರ್ಹ.

ಇಷ್ಟು ಅದ್ಬುತವಾಗಿರುವ ಈ ಪುಸ್ತಕವನ್ನು ಎಷ್ಟು ಬೇಗ ಓದಿ ಮುಗಿಸಿದೆ ಎಂದು ನನಗೆ ತಿಳಿಯದು.  ಒಂದು ಅದ್ಬುತ ಇತಿಹಾಸದ ಲೋಕವನ್ನೇ ನಿಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ ಈ ಪುಸ್ತಕ.  ನಿಜವಾಗಲೂ ಒಂದು ಬಾರಿ ಓದಲೇ ಬೇಕಾದ ಪುಸ್ತಕ.  ಒಂದು ಬಾರಿ ಓದಿದಮೇಲೆ ಮತ್ತೆಷ್ಟೂ ಬಾರಿ ಅದನ್ನು ಓದುತ್ತಿರಾ ಎಂಬುದಕ್ಕೆ ಒಮ್ಮೆ ಪುಸ್ತಕ ಓದಿ ನೋಡಿ.

ganeshayya signಪುಸ್ತಕ ಓದುವಾಗಲೇ ಎರಡು ಬಾರಿ ಡಾ. ಕೆ.ಎನ್.ಗಣೇಶಯ್ಯನವರನ್ನು ಭೇಟಿಯಾಗಲು ನನಗೆ ಅವಕಾಶ ಸಿಕ್ಕಿತು.  ಮೊದಲ ಬಾರಿ ಬೆಂಗಳೂರಿನ ತಾರಾಲಯದಲ್ಲಿ ಜೀವ ವಿಜ್ಞಾನದ ಬಗ್ಗೆ ಮಾತನಾಡಲು ಬಂದಿದ್ದರು.  ಆಗ ಭೇಟಿಯಾಗಿ ಈ ಪುಸ್ತಕದ ಬಗ್ಗೆ ಒಂದೆರಡು ನಿಮಿಷ ಮಾತನಾಡಿದ್ದೆ.  ಎರಡನೇ ಬಾರಿ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಲು ಬಂದಿದ್ದರು.  ನಾನು ನನ್ನ ಸ್ನೇಹಿತರಾದ ನವೀನ, ದೀಪಕ್ ಮೂರು ಜನನು ಹೋಗಿ ಅವರನ್ನು ಮಾತಿಗೆ ಎಳೆದೆವು.  ಆಗಲೇ ಅವರು ನನ್ನ ಪದ್ಮಪಾಣಿ ಪುಸ್ತಕದ ಮೇಲೆ ತಮ್ಮ ಹಸ್ತಾಕ್ಷರವನ್ನು ಎಳೆದುಕೊಟ್ಟರು.  ಅದೇ ಪಕ್ಕದಲ್ಲಿರುವ ಫೋಟೋ.  ಆದರೆ ಎರಡು ಬಾರಿಯೂ ಅವರ ಜೊತೆ ಫೋಟೋ ತೆಗೆಸಿಕೊಳ್ಳಲ್ಲು ಮರೆತಿದ್ದೆ!

ಅಂದಹಾಗೆ ಡಾ. ಕೆ.ಎನ್.ಗಣೇಶಯ್ಯನವರ ಇತರ ಪುಸ್ತಕಗಳು.

  • ಶಾಲಾಭಂಜಿಕೆ – ಕಥಾ ಸಂಕಲನ
  • ಕನಕ ಮುಸುಕು – ಕಾದಂಬರಿ
  • ಕರಿಸಿರಿಯಾನ – ಕಾದಂಬರಿ
  • ಕಪಿಲಿಪಿಸಾರ – ಕಾದಂಬರಿ


-ವಿಶ್ವಕೀರ್ತಿ .ಎಸ್
14/09/2013

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s