“ಕರ್ವಾಲೊ ಕಂಡ ಮಂದಣ್ಣ”

“ಸಾರ್ ಮಂದಣ್ಣನಿಗೆ  ಒಂದು ನೌಕರಿ ಸಿಗಲಿಲ್ಲ ಅಂತ ಬೇಸರ ಮಾಡಿಕೊಂಡು ಎಲ್ಲೆಲೋ ತಿರುಗ್ತಿದಾನೆ ಸಾರ್.  ನನ್ನ ಹತ್ತಿರ ಮಿನಿಸ್ಟ್ರಿಗೆ ಒಂದು ಅರ್ಜಿ ಬರೆದು ಕೊಡಿಂತ ಬಂದಿದ್ದ” ಅಂದೆ.

ಕರ್ವಾಲೋ ಕೋಪದಿಂದ “ಸ್ಟುಪಿಡ್ ಫೆಲೋ, ಅಯೋಗ್ಯ. ನನ್ನ ಹತ್ತಿರ ಬಂದು ಒಂದು ಪ್ಯೂನ್ ಕೆಲಸ ಕೊಡಿಂದ.  ನಾಚಿಕೆಅಗೊದಿಲ್ಲ ಅವನಿಗೆ! ನನ್ನ ಶಿಷ್ಯ ಅಂತ ಅನ್ನಿಸಿಕೊಂಡು ಪ್ಯೂನ್ ಆಗ್ತೀನಿ ಅನ್ನೋದುಕ್ಕೆ!  ಗಮಾರ ಅವನು!” ಎಂದು ಉರಿದುಬಿದ್ದರು.

“ಇಲ್ಲ ಸಾರ್. ಬರೀ ಹೊಟ್ಟೆಪಾಡಿಗೆ ಅವನು ಹಾಗಡ್ತಿಲ್ಲ ಸಾರ್.  ಏನೋ ಕಾಂಪ್ಲಿಕೆಶನ್  ಬಂದಿದೆ ಅವನಿಗೆ.  ಏನೋ ಫ್ಯಾಮಿಲಿ ತೊಂದರೆಗಳು” ಎಂದೆ.

“ಆಲ್ರೈಟ್, ಅವನ ತೊಂದರೆ ಏನಿದ್ರೂ ಪರಿಹರಿಸೋಣ.  ಆದರೆ ಅವನು ಏನಾಗ್ಬೇಕನ್ನೋದು ನನಗೆ ಗೊತ್ತು. ಅವನು ಇನ್ನು ತಿಳಿದುಕೊಳ್ಳೋದು ಸಾಧಿಸೋದು ಬಹಳ ಇದೆ.  ಪ್ಯೂನ್ ಕೆಲಸ ಅಟೆoಡರ್ ಕೆಲಸ ಅಂತ ಅಂಗಲಾಚಬರದು.  ಅಷ್ಟೇ.  ಷೇಮ್ ಷೇಮ್” ಎಂದರು.

ನಾನು ಬೆಚ್ಚಿಬಿದ್ದೆ. ಪ್ರಭಾಕರ ಚಡಪಡಿಸಿದ, ನನಗೆ ಏನು ಸರಿಯಾಗಿ ಗೊತ್ತಾಗಲೇ ಇಲ್ಲ.  ಈ ಮಂದಣ್ಣ! ಮಂಗ ಸುಳೆಮಗ! ಪಿಗ್ಮ್ ಟನ್  ಹೊತ್ಕೊಂಡು ತಿರುಗ್ತ ಇದ್ದ. ಕರ್ವಾಲೋ ನೋಡಿದರೆ ಇವನು ಭಾರಿ ಪ್ರತಿಭಾವಂತ ಅನ್ನೋ ಹಾಗೆ  ಹೇಳ್ತಾರೆ!

 

ಈಗೆ ಉರಿನವರಿಗೆಲ್ಲ ಮಂದಣ್ಣನ ಮೇಲೆ ಒಂದೊಂದು ಬಗೆಯ ಅಭಿಪ್ರಯಗಳಿದ್ದರು ಸಹ ಕರ್ವಾಲೊ ಅವರಿಗೆ ಮಂದಣ್ಣನ ಸಾಮರ್ಥ್ಯವೇನು, ಅವನು ಯಾವ ಕೆಲಸದಲ್ಲಿ ನಿಪುಣನು, ಅವನಿಂದ ಏನನ್ನು ಮಾಡಿಸಬೇಕು ಎಂಬುದನ್ನು ಅರಿತಿದರು.  ಅದರಂತೆಯೆ ಮಾತನಾಡುತಿದ್ದರು.  ಇದೆಲ್ಲವೂ ತೇಜಸ್ವಿಯವರಿಗೂ ಸಹ ಈ ವಿಜ್ಞ್ಯನಿಯ ಒಂದು ತರಹದ ಅಸಂಬದ್ದ ಮಾತುಗಳು ಎಂದೆನಿಸುತ್ತಿದ್ದವು.

ಕಾಲ ಬರುವವರೆಗೂ ಮಂದಣ್ಣನ ಸಾಮರ್ಥ್ಯವನ್ನು ಬಚ್ಚೀಟ್ತಿದ್ದ ಕರ್ವಾಲೊ ಅವರು, ಒಂದು ದಿನ ಬಿಚ್ಚಿಟ್ಟಾಗ ಅಲ್ಲಿ ಇರುವವರಿಗೆಲ್ಲ ಆಶ್ಚರ್ಯ!! ಸ್ವಲ್ಪ ತಿಳಿದವನಾಗಿದ್ದ ಪ್ರಭಾಕರ ಮತ್ತು ತೇಜಸ್ವಿಗೆ ಮಾತ್ರ ಅವನ ಸಾಮರ್ಥ್ಯ ಎಂಥದ್ದೆಂದು ಅರ್ಥವಾಯಿತು.  ಅಲ್ಲಿಯವರಿಗೂ ಅಸಂಬದ್ದ ಮಾತುಗಳು ಎಂದು ಯೋಚಿಸುತಿದ್ದ ತೇಜಸ್ವಿಗೆ ಮಂದಣ್ಣ ಏನು ಎಂಬುದು ಅರಿವಾಯಿತು, ಅವನಿಂದ ಯಾವ ಕೆಲಸ ಮಾಡಿಸಬೇಕು ಅಂತಾನು ತಿಳಿತು.  ಮಂಗ, ಸುಳೆಮಗ! ಪಿಗ್ಮ್ ಟನ್  ಹೊತ್ಕೊಂಡು ತಿರುಗ್ತ ಇದ್ದರು, ಕರ್ವಾಲೊ ಅವರು ಅವನ ಸಾಮರ್ಥ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿದ್ದರು  ಅವನಿಗೆ ಎಂತ ಕೆಲಸ ಕೊಡಬೇಕು, ಏನು ಮಾಡಬೇಕು ಎಂದು ಯೋಚಿಸಿದ್ದರು.

ಈಗೆ ಪ್ರತಿಯೊಬ್ಬರಿಗೂ ಹುಟ್ಟಿನಿಂದಲೂ ಅವರದೇ ಆದ ಒಂದು ಸ್ವಾಭಾವಿಕ ಗುಣ ಇರುತ್ತದೆ.  ಅದನ್ನು ಅವರೇ ಗ್ರಹಿಸಿಕೊಳ್ಳಲು ಎಲ್ಲರಿಂದಲೂ ಸಾದ್ಯವಿಲ್ಲ, ನೂರರಲ್ಲಿ ಒಬ್ಬರು ಮಾತ್ರ ಅವರ ಸ್ವಾಭಾವಿಕ ಗುಣವನ್ನು ಗ್ರಹಿಸಿ ಮುನ್ನಡೆಯುತ್ತಾರೆ.  ಆದರೆ ಅದು ಎಲ್ಲರಲ್ಲೂ ಸಾದ್ಯವಿಲ್ಲ.  ಅದನ್ನು ತಿಳಿಸಿಕೊಡುವ ಒಬ್ಬ ವ್ಯಕ್ತಿಯು ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ದಿನ ಬರುತ್ತಾರೆ.  ಇಲ್ಲದಿದ್ದರೆ ಅಂತಹ ಸಾಮರ್ಥ್ಯವನ್ನು ತಿಳಿಸುವ ಸಂಧರ್ಬಗಳು ಬಂದೆ ಬರುತ್ತವೆ.  ಅದನ್ನು ಗ್ರಹಿಸಿ ನಮ್ಮ ಸಾಮರ್ಥ್ಯವನ್ನರಿತು, ಅದರ ಮಾರ್ಗದಲ್ಲಿ ಮುನ್ನೆಡೆದರೆ ಮಾತ್ರ ಯಶಸ್ಸು ಕಂಡಿತವಾಗಿಯು ಸಿಗುವುದು. ಇಲ್ಲದಿದ್ದರೆ ಭೂಮಿಗೆ ಬಾರವಗೆ ಇರಬೇಕಾಗುತ್ತದೆ.

ಇದೆಲ್ಲವನ್ನು ಹೇಳ್ತಿರ್ಬೇಕದ್ರೆ ತಕ್ಷಣ Randy Pauch ನ ಒಂದು ಮಾತು ನೆನಪಾಯ್ತು….

Find the best in everyone, no matter how many years you have to wait, even at his death time.

ಕರ್ವಾಲೊ ದೃಷ್ಟಿಯಲ್ಲಿ ಈ ಮಾತು ಅತ್ಯಂತ ಸೂಚಕ ಅನ್ನುಸ್ತು.

“ಕರ್ವಾಲೊ” ಚಿಕ್ಕಮಗಳೂರಿನ ಮೂಡಿಗೆರೆಯ ಚಿಕ್ಕ ಹಳ್ಳಿಯೊಂದರಲ್ಲಿ ಮುರಾರ ಮುಂದೆ ಏಳು ಸೋನ್ನೆಗಳನ್ನು ಆಕಿ, ಅಷ್ಟು ವರುಷಗಳ ಹಿಂದಿನ ಜೀವಿಯ ಸಂಕುಲವನ್ನು ಅರ್ಥಮಾಡಿಕೊಳ್ಳುವ ಕಥೆ.  ಇದರೊಡನೆ ವಿಜ್ಞಾನಿಯಾದ ಕರ್ವಾಲೊ ಅವರು ಹೇಗೆ ಹಳ್ಳಿಯ ಜೀವನದ ಜೊತೆ ಬೆರತು, ಅಲ್ಲಿರುವ ಪರಿಸರಕ್ಕೆ ಒಗ್ಗೂಡಿ, ತಮ್ಮ ನಿಜವಾದ ಅನ್ವೇಷಣೆಯನ್ನು ಅಲ್ಲಿರುವ ಜನರ ನಡುವೆ ಬೆರೆತು, ಅರ್ಥವಾಗದವರನ್ನು ಸಾದ್ಯವಾದಷ್ಟು ಅರ್ಥಮಾಡಿಸಿ  ಕಾಲಜ್ಞಾನಿಯಾಗುವ ಕಥೆ.

ಮೂಡಿಗೆರೆಯ ಸೌಂದರ್ಯವನ್ನು ಅದರದೇ ಆದ ಒಂದು ಭಾಷೆಯಲ್ಲಿ ಚಿತ್ರಿಸುವ ತೇಜಸ್ವಿಯವರು, ಮೂಡಿಗೆರೆಯನ್ನು ನೋಡದಿದ್ದರೂ, ಚಿಕ್ಕಮಗಳೂರಿನ ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ಉಣಬಡಿಸುತ್ತಾರೆ.  ಅಂತಹ ಜಾಗಗಳನ್ನು ನೋಡಲೇಬೇಕಾದ ಹುಮ್ಮಸ್ಸು ನಮ್ಮಲ್ಲಿ ಮೂಡುತ್ತದೆ.  ಹಾಗೆಯೆ, ಅಲ್ಲಿಯ ಜನರ ಬೈಗುಳದ ಭಾಷೆಯು ಎಷ್ಟು ಪ್ರೀತಿಯುಕ್ತವರಿರುತ್ತದೆ, ಅವರ ಪ್ರೀತಿ, ಬಾಂದವ್ಯ ಎಂತಹುದು ಎಂದು ನೆನಪಿಸುವುದಕ್ಕೆ ಅನೇಕ ಸಂಧರ್ಬಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ.  “ಕರ್ವಾಲೊ” ಎಂಬ ಕಥೆಯನ್ನು ತೇಜಸ್ವಿಯವರ ಭಾಷೆಯಲ್ಲಿ ಸವಿಯಬೇಕಾದರೆ, ಅದನ್ನು ಒಂದು ಸಲ ಓದೇ ತೀರಬೇಕು……

-ವಿಶ್ವ ಕೀರ್ತಿ. ಎಸ್

Advertisements

One thought on ““ಕರ್ವಾಲೊ ಕಂಡ ಮಂದಣ್ಣ”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s